ಮನುಷ್ಯನು ಮೃಗಗಳಿಗಿಂತ ಯಾಕೆ ಭಿನ್ನ ಎಂಬ ಪ್ರಶ್ನೆಗೆ ಸಿಗುವ ಉತ್ತರ ಅವನಿಗೆ ವಿವೇಚನಾ ಶಕ್ತಿ ಇದೆ, ಭಾವನೆಗಳಿವೆ ಎಂಬುದು. ಆದರೆ ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ಎಂಬುದಕ್ಕೆ ಸಾಕ್ಷಿಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸತ್ತ ಮರಿಯನ್ನು ಆನೆಯೊಂದು ಕಚ್ಚಿಕೊಂಡು ಹೋಗುತ್ತಿದ್ದು, ಅದರ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
A video of elephants carrying a calf for Funeral procession becomes viral on social media.